ನಮ್ಮ ವಿಜಯಪುರ

ಎಂ.ಬಿ. ಪಾಟೀಲ ಸೋಲಿಸಲು ಅವರೇ ಸನ್ನದ್ದರಾಗಿದ್ದಾರೆ? ಯತ್ನಾಳ ಹೇಳಿದ್ದು ಯಾರ ಬಗ್ಗೆ?

ಸರಕಾರ್ ನ್ಯೂಸ್ ವಿಜಯಪುರ

ಒಬ್ಬರಲ್ಲ, ಇಬ್ಬರಲ್ಲ 10 ಎಂ.ಬಿ ಪಾಟೀಲ ಬಂದ್ರೂ ನನ್ನನ್ನು ಸೋಲಿಸಲು ಆಗಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲರಿಗೆ
ಟಾಂಗ್ ನೀಡಿದ್ದಾರೆ.

ಈಚೆಗಷ್ಟೇ ತಮ್ಮ ವಿರುದ್ದ ವಾಗ್ದಾಳಿ ನಡೆಸಿದ್ದ ಎಂ.ಬಿ. ಪಾಟೀಲರ ವಿಷಯಕ್ಕೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಎಂ.ಬಿ. ಪಾಟೀಲ ನನ್ನ ಸೋಲಿಸುವ ಭ್ರಮೆಯಲ್ಲಿದ್ದಾರೆ ಎಂದರು.

ಎಂ.ಬಿ. ಪಾಟೀಲ ರನ್ನು ಸೋಲಿಸಲು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು, ಓರ್ವ ಮಾಜಿ ಶಾಸಕ ತಯಾರಿ ಮಾಡುತ್ತಿದ್ದಾರೆ. ಯಲ್ಲಮ್ಮನ ಗುಡ್ಡದಲ್ಲಿ ಮುಲ್ಲಾನದು ಏನು ಕೆಲಸ? ಎಂದಿರುವ ಯತ್ನಾಳ, ಎಂಬಿಪಿ ಸೋಲಿಸಲು ಅವರೆ ಸನ್ನದ್ಧ ಆಗಿದ್ದಾರೆ ಎಂದು ಕಿಡಿಕಾರಿದರು.

ಅಲ್ಲದೇ, ಹರಿಹರ ವಚನಾನಂದಶ್ರೀ ವಿರುದ್ಧ ಶಾಸಕ ಯತ್ನಾಳ ವಾಗ್ದಾಳಿ ನಡೆಸಿದರು. ಹರಿಹರ ವಚನಾನಂದಶ್ರೀನ್ನು ಬ್ರೋಕರ್ ಸ್ವಾಮಿ‌ ಆಗಿದ್ದಾರೆ. ಮಂತ್ರಿಗಿರಿ ಮಾಡಲು ಹರಿಹರ ಶ್ರೀ 10 ಕೋಟಿ ವಸೂಲಿ ಮಾಡಿದ್ದಾರೆ.
ಅಲ್ಲದೇ, ಮಾಜಿ ಸಿಎಂ ಬಿಎಸ್ವೈ ಕಡೆಗೆ ಹರಿಹರ ಶ್ರೀ 10 ಕೋಟಿ ಇಸ್ಕೊಂಡಿದ್ದಾರೆ. ಅಲ್ಲದೇ, ಮಠದಲ್ಲಿ ಅವ್ಯವಹಾರ ಮಾಡಿದ್ದಾರೆ. ಅದನ್ನು ಬರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಹರಿಹರಶ್ರೀಗಳ ಬಣ್ಣ ಬಯಲು ಮಾಡುತ್ತೇನೆ ಎಂದರು.

error: Content is protected !!