ಚುನಾವಣೆ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿ, ಎರಡೂವರೆ ಕೋಟಿಗೂ ಅಧಿಕ ಹಣ ವಶಕ್ಕೆ
ಸರಕಾರ ನ್ಯೂಸ್ ವಿಜಯಪುರ
ಲೋಕಸಭೆ ಚುನಾವಣೆ ನೀತಿ ಸಂಹಿತೆ ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಕಾರ್‌ನಲ್ಲಿ ಸಾಗಿಸುತ್ತಿದ್ದ 2,93,50,000 ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಸಿಂದಗಿ ಬೈಪಾಸ್ ಹತ್ತಿರ ಮಂಗಳವಾರ ವಾಹನ ತಪಾಸಣೆಯಲ್ಲಿದ್ದ ಪೊಲೀಸರಿಗೆ ಹೈದ್ರಾಬಾದ್‌ದಿಂದ ಟೊಯೋಟೊ ಕಾರ್‌ನಲ್ಲಿ ಹುಬ್ಬಳ್ಳಿಗೆ ಹಣ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಎಸ್‌ಪಿ ಋಷಿಕೇಶ ಸೋನಾವಣೆ ಮಾರ್ಗದರ್ಶನದಲ್ಲಿ ಎಎಸ್‌ಪಿ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ (ಎಂಎಚ್ 01, ಸಿಡಿ-7537) ತಪಾಸಣೆ ನಡೆಸಲಾಗಿದೆ.
ಕಾರ್‌ನಲ್ಲಿದ್ದ ಸಾಂಗಲಿ ಮೂಲದ ಬಾಲಾಜಿ ನಿಕ್ಕಂ ಹಾಗೂ ಸಚಿನ ಮೋಯಿತೆ ಇವರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ ಮತ್ತು 2,93,50,000 ರೂಪಾಯಿ ನಗದು ಹಾಗೂ 2 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯ ಸಿಬ್ಬಂದಿ ಎಂ.ಕೆ. ಹಾವಡಿ, ಡಿ.ಆರ್. ಪಾಟೀಲ, ಎಂ.ಬಿ. ಪಾಟೀಲ, ಮಲ್ಲು ಹೂಗಾರ ಭಾಗಿಯಾಗಿದ್ದು, ಸೂಕ್ತ ಬಹುಮಾನ ಘೋಷಿಸಿದ್ದಾಗಿ ಎಸ್‌ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ.