ಶಾಸಕ ಯತ್ನಾಳ ವಿರುದ್ದು ಓವೈಸಿ ವಾಗ್ದಾಳಿ, ಪಾಕಿಸ್ತಾನದ ಮೇಲೆ ಯಾರಿಗೆ ಹೆಚ್ಚು ಪ್ರೀತಿ?
ಸರಕಾರ್ ನ್ಯೂಸ್ ವಿಜಯಪುರ
`ನಾವು ಪಾಕಿಸ್ತಾನದ ಹೆಸರು ತಪ್ಪಿಯೂ ಕೂಡ ಹೇಳುವುದಿಲ್ಲ. ಆದರೆ ಶಾಸಕ ಯತ್ನಾಳ ಪದೇ ಪದೇ ಪಾಕಿಸ್ತಾನ ಹೆಸರು ಉಲ್ಲೇಖ ಮಾಡ್ತಾರೆ. ಪಾಕಿಸ್ತಾನ ಮೇಲೆ ಅವರಿಗೆ ಪ್ರೀತಿ ಇದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ ಮಂಗಳವಾರ ವಿಜಯಪುರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರಿಗೆ ಪಾಕಿಸ್ತಾನ ಮೇಲೆ ಪ್ರೀತಿ ಯಾಕೇ ಇದೆ ಎಂಬುದು ಅವರಿಗೇ ಗೊತ್ತು, ನನಗಂತೂ ಗೊತ್ತು ಇಲ್ಲ. ಪ್ರಧಾನಿ ಮೋದಿ ಯತ್ನಾಳಗೆ ಹೇಳಿಕೊಟ್ಟಿರಬಹುದು. ಅದಕ್ಕಾಗಿ ಪದೇ ಪದೇ ಪಾಕಿಸ್ತಾನ ಹೆಸರು ಹೇಳ್ತಾರೆ ಎಂದು ವಾಗ್ದಾಳಿ ಮಾಡಿದರು.
ಬಿಜೆಪಿ ಪಕ್ಷದಿಂದ ಮುಸ್ಲಿಂರ ಗಡ್ಡ, ಊಟ, ಟೋಪಿಗೆ ತೊಂದರೆ ಇದೆ ಎಂದ ಓವೈಸಿ ಸಬ್ ಕಾ ವಿಕಾಸ, ಸಬ್ ಕಾ ಸಾತ್ ಬರೀ ಬಿಜೆಪಿ ಮಾತಿನಲ್ಲೇ ಇದೆ. ಬಿಜೆಪಿ ಮುಸ್ಲಿಂರ ವಿರುದ್ಧ ಇದೆ ಎಂದು ಕಿಡಿಕಾರಿದರು. ಬಿಜೆಪಿ ಹಲಾಲ್ ಕಟ್ ಮಾಡಿ ತಮ್ನ ಕಮಿಷನ್ ಮಾಡಿಕೊಳ್ಳುತ್ತಿದೆ.
ಹಲಾಲ್ ವಿಚಾರದಲ್ಲಿ ಬಿಜೆಪಿ ಹಲಾಲ್ ಕಮಿಷನ್ ಮಾಡುತ್ತಿದೆ. ನಮ್ಮ ಹಲಾಲ್ ಮಾಂಸ ಮಾತ್ರ ಬಿಜೆಪಿಗೆ ಕಟ್ಟು ತರಹ ನೋಡ್ತಾರೆ. ಬಿಜೆಪಿ ಕಮಿಷನ್ ಬಗ್ಗೆ ವಿಡಿಯೋಗಳಿವೆ ಎಂದು ಓವೈಸಿ ಆರೋಪಿದರು.