ವಿದ್ಯುತ್ ಶಾರ್ಟ್ ಸರ್ಕ್ಯೂಟ್, ತಗಡಿನ ಶೆಡ್ ಭಸ್ಮ….ಎಲ್ಲಿ? ಹೇಗಾಯ್ತು?
ಸರಕಾರ್ ನ್ಯೂಸ್ ಇಂಡಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪತ್ರಾಸ್ ಮನೆ ಭಸ್ಮವಾಗಿರುವ ಘಟನೆ ಇಂಡಿ ತಾಲೂಕಿನ ತೆನ್ನಿಹಳ್ಳಿ ಗ್ರಾಮದ ಇಂದಿರಾನಗರದಲ್ಲಿ ಬುಧವಾರ ನಡೆದಿದೆ.
ನೆಹಾಲ್ ನಬೀಸಾಬ ಜಮಾದಾರ ವಾಸವಾಗಿರುವ ಪತ್ರಾಸ್ ಮನೆ ಭಸ್ಮವಾಗಿದೆ. ಪತ್ರಾಸ್ ಮನೆಗೆ ಬೆಂಕಿ ತಗುಲಿ ‘ಹತ್ತು ಸಾವಿರ ನಗದು ಹಣ, ಒಂದುವರೆ ತೊಲೆ ಬಂಗಾರ, ಒಂದು ಚೀಲ ಜೋಳ,ಒಂದು ಚೀಲ ಗೋದಿ ,ಎರಡು ಚೀಲ ಅಕ್ಕಿ, ಸಂಬಂಧಿಸಿದ ದಾಖಲೆಗಳು ಬೆಂಕಿಗಾಹುತಿ ಆಗಿವೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.