ವಿಜಯಪುರ

ಆನ್‌ಲೈನ್‌ ದೋಖಾ; 4 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ಸಾಪ್ಟವೇರ್‌ ಇಂಜಿನಿಯರ್‌ ಯಾರು ಗೊತ್ತಾ?

ಸರಕಾರ ನ್ಯೂಸ್‌ ವಿಜಯಪುರ

ಮೊಬೈಲ್‌ನಲ್ಲಿ ಬಂದ ಜಾಹೀರಾತು ಮೋಹಕ್ಕೆ ಒಳಗಾದ ಸಾಫ್ಟವೇರ್‌ ಇಂಜಿನಿಯರ್‌ ಬರೋಬ್ಬರಿ 4,72,352 ರೂಪಾಯಿ ವಂಚನೆಗೆ ಒಳಗಾಗಿದ್ದಾರೆ.

ವಿಜಯಪುರದ ಆಶ್ರಮ ಎದುರಿನ ಟೀಚರ್ಸ್‌ ಕಾಲನಿ ನಿವಾಸಿ ಅನೀತಾ ಎಂಬುವರು ಹಣ ಕಳೆದುಕೊಂಡಿದ್ದು, ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್‌ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಏನಿದು ಪ್ರಕರಣ?

ಮೊಬೈಲ್‌ನಲ್ಲಿ ನೌಕರಿ ಡಾಟ್‌ ಕಾಮ್‌ ವೆಬ್‌ಸೈಟ್‌ ನೋಡುತ್ತಿದ್ದಾಗ ಲರ್ನ್‌ ಟು ಟ್ರೇಡ್‌ ಆಂಡ್‌ ಅಟಲಿಸ್ಟ್‌ 3000-4000 ಪರ್‌ ಡೇ ಎಂಬ ಜಾಹೀರಾತು ಬಂದಿದೆ. ಅದನ್ನು ಕ್ಲಿಕ್‌ ಮಾಡಲಾಇ ಅಮೆಜಾನ್‌ ಮಾಲ್‌ ಎಂಬ ವೆಬ್‌ಸೈಟ್‌ ಓಪನ್‌ ಆಗಿದೆ. ಅದರಲ್ಲಿ ನೋಂದಣಿಯಾಗಲು ತಿಳಿಸಿದ ಪ್ರಕಾರ ಅನಿತಾ ನೋಂದಾಯಿಸಿಕೊಂಡಿದ್ದು ಮೊಬೈಲ್‌ ನಂಬರ್‌ ಸಹಿತ ಹಲವು ಮಾಹಿತಿ ಹಂಚಿಕೊಂಡಿದ್ದಾರೆ. ಬಳಿಕ ಹಂತ ಹಂತವಾಗಿ ಅನಿತಾ ಹಣ ಹಾಕುತ್ತಾ ಬಂದಿದ್ದಾರೆ. ಅಮೇಜಾನ್‌ ವಾಲ್ಲೆಟ್‌ ಚೆಕ್‌ ಮಾಡಲಾಗಿ ಅದರಲ್ಲಿ 9,30,519 ಬ್ಯಾಲೆನ್ಸ್‌ ತೋರಿಸಿದೆ. ಅದನ್ನು ಡ್ರಾ ಮಾಡಲು ಹೋದಾಗ ಶೇ. 20ರಷ್ಟು ಟ್ಯಾಕ್ಸ್‌ ಕಟ್ಟುವಂತೆ ತಿಳಿಸಿದ್ದು, ಆಗ ಸಂಶಯ ಬಂದು ಹಣ ಅನಿತಾ ಹಣ ವಾಪಸ್‌ ಕೇಳಿದ್ದಾರೆ. ಆಗ ಅವರು ಹಣ ವಾಪಸ್‌ ಮಾಡದ ಕಾರಣ ಮೋಸದ ಅರಿವಾಗಿ ಅನಿತಾ ದೂರು ದಾಖಲಿಸಿದ್ದಾರೆ.

ಒಟ್ಟಿನಲ್ಲಿ ನಕಲಿ ವೆಬ್‌ ಸೈಟ್‌ ಓಪನ್‌ ಮಾಡಿ 4,72,352 ರೂಪಾಯಿ ಪಡೆದು ಲಾಭಾಂಶ ಕೊಡದೇ ಮೋಸ ಮಾಡಿರುವ ಆರೊಪಿತರನ್ನು ಹಿಡಿಯಲು ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!