ರಾಜ್ಯ

ಕೃಷ್ಣಾನದಿಯಲ್ಲಿ ಮೂವರ ಶವ ಪತ್ತೆ | ಮತ್ತೇ ಮೂವರಿಗೆ ಶೋಧ

ವಿಜಯಪುರ: ಎಕಾ ರಾಜಾ ರಾಣಿ ಆಟವಾಡುವ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೃಷ್ಣ ನದಿಯಲ್ಲಿ ತೆಪ್ಪದ ಮೂಲಕ ಹೋಗುವಾಗ ತೆಪ್ಪ ಮುಗುಚಿ ಆರು ಜನರು ನಾಪತ್ತೆ ಪ್ರಕರಣದಲ್ಲಿ ಮೂವರ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕೃಷ್ಣಾ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೋಲಾರ ಪಟ್ಟಣದ ನಿವಾಸಿ ದಶರಥ ಗೌಡರ್ (54), ತಯಾಬ್ ಹಾಗೂ ಓರ್ವನ ಶವಪತ್ತೆಯಾಗಿದೆ. ಇನ್ನೂ
ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ದಶರಥ ಗೌಡರ ಶವ ಪತ್ತೆ ಹಚ್ಚಿ ಆಂಬುಲೆನ್ಸ್ ಮೂಲಕ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಶವ ರವಾನೆ ಮಾಡಲಾಗಿದೆ.
ಈವರೆಗೂ ಮೂವರ ಶವ ಪತ್ತೆ ಸಿಕ್ಕಿದೆ. ಇತರ ಮೂವರಿಗಾಗಿ ಶೋಧನಾ ಕಾರ್ಯ ಮುಂದುವರಿದಿದೆ.

error: Content is protected !!