ವಿಜಯಪುರ

ಕುಡಿದ ಮತ್ತಿನಲ್ಲಿ ಹೀಗಾ ಮಾಡೋದು? ಬಿಸಿಲ ಬೇಗೆ ಸಹಿಸಲು ಬಾವಿಗೆ ಬಿದ್ದಿದ್ದೇಕೆ? ದ್ಯಾಬೇರಿಯಲ್ಲೊಂದು ಹೃದಯ ವಿದ್ರಾವಕ ಘಟನೆ

ವಿಜಯಪುರ: ಸ್ವಲ್ಪ ಯಾಮಾರಿದರೆ, ಬದುಕು ನಿರ್ಲಕ್ಷೃ ಮಾಡಿದರೆ, ಹುಂಬು ಧೈರ್ಯ ಮಾಡಿದರೆ ಏನೆಲ್ಲಾ ಅನಾಹುತವಾಗುತ್ತದೆ ಎಂಬುದಕ್ಕೆ ದ್ಯಾಬೇರಿಯಲ್ಲಿ ನಡೆದ ಘಟನೆಯೇ ಸಾಕ್ಷಿ.
ಬಿಸಿಲಿನ ತಾಪ ಹೆಚ್ಚುತ್ತಿದ್ದರೂ ಮಧ್ಯಾಹ್ನದ ಬೇಗೆಯಲ್ಲಿ ಕುಡಿದು ಊಟ ಮಾಡಿದ ವ್ಯಕ್ತಿ ಈಸಲು ಬಾವಿಗೆ ಹೋಗಿದ್ದೇ ಶವವಾಗಿ ಹೊರಬಂದಿದ್ದಾನೆ. ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 3ಕ್ಕೆ ಇಂಥದ್ದೊಂದು ಘಟನೆ ನಡೆದಿದ್ದು ಸೋಮವಾರ ಪೊಲೀಸರು ಕಾರ್ಯಾಚಾರಣೆ ನಡೆಸಿ ಶವ ಹೊರಗೆ ತೆಗೆದಿದ್ದಾರೆ. ಅಂದಹಾಗೆ ಮೃತ ವ್ಯಕ್ತಿ ಸ್ಥಳೀಯ ನಿವಾಸಿ ಪ್ರಕಾಶ ಮೋರೆ (40) ಎಂದು ತಿಳಿದು ಬಂದಿದೆ. ಕುಡಿದ ಮತ್ತಿನಲ್ಲಿ ಈಜಾಡಲು ಹೋಗಿದ್ದೇ ಸಾವಿಗೆ ಕಾರಣ ಎನ್ನಲಾಗಿದೆ. ಮೂಲಗಳ ಪ್ರಕಾರ ಬೆಟ್ಟಿಂಗ್ ಕಟ್ಟಿ ಈಸಲು ಒತ್ತಾಯಿಸಿದ್ದರೆನ್ನಲಾಗಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

error: Content is protected !!