ಚಲಿಸುತ್ತಿದ್ದ ಬಸ್ ಹಿಂಬದಿ ಚಕ್ರಕ್ಕೆ ತಲೆ ಕೊಟ್ಟ ಯುವಕ, ಬೆಚ್ಚಿಬೀಳಿಸುತ್ತಿದೆ ಸಿಸಿ ಟಿವಿ ದೃಶ್ಯಾವಳಿ….ಅಸಲಿಗೆ ಆಗಿದ್ದೇನು?
ಸರಕಾರ ನ್ಯೂಸ್ ವಿಜಯಪುರ
ಚಲಿಸುತ್ತಿದ್ದ ಬಸ್ ನ ಹಿಂದಿನ ಚಕ್ರದಡಿ ಬಿದ್ದು ಅಸುನೀಗಿರುವ ಯುವಕನೋರ್ವನ ಸಾವು ಆತಂಕದ ಜೊತೆಗೆ ಅಚ್ಚರಿಗೂ ಕಾರಣವಾಗಿದೆ.
ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಅಂದಾಜು 21 ರ ವಯೋಮಾನದ ಯುವಕ ಸಾವಿಗೀಡಾಗಿದ್ದು ಹಾಸನ ಮೂಲದವನೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಮೊಬೈಲ್ ನಲ್ಲಿ ಮಾತನಾಡುತ್ತ ನಿಂತಿದ್ದ ಯುವಕ ಬಸ್ ಬರುತ್ತಿದ್ದಂತೆ ಮೊಬೈಲ್ ದೂರ ಎಸೆದು ಬಸ್ ನ ಹಿಂಬದಿ ಚಕ್ರದಡಿ ಬಿದ್ದಿದ್ದಾನೆ. ತಲೆ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಯುವಕ ಹಿಂದಿನ ಚಕ್ರಕ್ಕೆ ತಲೆ ಕೊಟ್ಟಿರುವ ಅಂಶ ತಿಳಿದು ಬರುತ್ತಿದೆ. ಇನ್ನು ಮೊಬೈಲ್ ಲಾಕ್ ಆಗಿದ್ದು ಯುವಕನ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)