Uncategorized

ಬಸ್ ನಿಲ್ದಾಣಗಳಲ್ಲಿ ಕಳ್ಳತನ, ಮೂವರ ಬಂಧನ, ವಶಪಡಿಸಿಕೊಂಡ ಚಿನ್ನಾಭರಣ ಎಷ್ಟು ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

ಕಳೆದ ಕೆಲವು‌ ದಿನಗಳಿಂದ ಬಸ್ ನಿಲ್ದಾಣಗಳಲ್ಲಿ ಘಟಿಸುತ್ತಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಹೆಡೆ ಮುರಿ ಕಟ್ಟಿ ತಂದಿದ್ದಾರೆ.

ಬಸ್ ನಿಲ್ದಾಣಗಳಲ್ಲಿ ಬಸ್ ಏರುವಾಗ ಚಿನ್ನ ಕಳ್ಳತನ ಮಾಡುತ್ತಿದ್ದ ಮೂವರನ್ನು ಬಂಧನ ಮಾಡಲಾಗಿದೆ.

ಗಂಗೂಬಾಯಿ ಕಾಳೆ, ನರಸಮ್ಮ ಪಾಟೀಲ, ಕರಿಷ್ಮಾ ಉಪಾಧ್ಯೆ ಬಂಧಿತ ಆರೋಪಿಗಳು.

ನಗರದ ಕೇಂದ್ರ ಬಸ್ ನಿಲ್ದಾಣ ಹಾಗೂ ಸೇಟ್‌ಲೈಟ್ ಬಸ್ ನಿಲ್ದಾಣದಲ್ಲಿ ಇವರು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಒಟ್ಟು 9 ಕಳ್ಳತನ ಕೇಸ್‌ಗಳಲ್ಲಿ 8 ಲಕ್ಷದ 70 ಸಾವಿರ ಮೌಲ್ಯದ 146 ಗ್ರಾಂ ಚಿನ್ನ ಕದ್ದಿದ್ದು ಪೊಲೀಸರು ಜಪ್ತಿಗೈದಿದ್ದಾರೆ. ಈ ಕುರಿತು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದು ಎಸ್ ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ‌.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!