ಬಿಜೆಪಿ- ಜೆಡಿಎಸ್ ಗೆ ಸೆಡ್ಡು ಹೊಡೆದ ಕೈ ಪಡೆ, ಸಿದ್ದರಾಮಯ್ಯ ಬೆನ್ನಿಗೆ ನಿಂತ ಕಾರ್ಯಕರ್ತರು, ಬೃಹತ್ ಜಾಥಾದ ಸಂದೇಶವೇನು ಗೊತ್ತಾ?
ವಿಜಯಪುರ: ಅಹಿಂದ ನಾಯಕ ಎಂದೇ ಖ್ಯಾತಿ ಪಡೆದಿರುವ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಅಪಾರ ಕಾರ್ಯಕರ್ತರು ಸಹ ನಿಂತುಕೊಂಡಿದ್ದಾರೆ !
ಕಳೆದ ಹಲವು ದಿನಗಳಿಂದ ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮದಲ್ಲಾದ ಅವ್ಯವಹಾರದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅವರ ಹೆಸರು ಎಳೆತಂದು ಅವರ ವ್ಯಕ್ತಿತ್ವಕ್ಕೆ ಕಪ್ಪು ಮಸಿ ಬಳಿಯುವ ಯತ್ನ ನಡೆದಿದೆ.
ಈಗಾಗಲೇ ಬಿಜೆಪಿ- ಜೆಡಿಎಸ್ ಪಾದಯಾತ್ರೆ ಕೂಡ ಕೈಗೊಂಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಆಯಾ ಜಿಲ್ಲಾ ಕೇಂದ್ರದಲ್ಲಿ ಜಾಥಾ ಹಮ್ಮಿಕೊಂಡಿದ್ದು, ಯಶಸ್ವಿಯಾಗಿ ನೆರವೇರಿತು.
ವಿಜಯಪುರ ದ ಸಿದ್ದೇಶ್ವರ ದೇವಸ್ಥಾನದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ನಡೆದ ಜಾಥಾದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸಿದ್ದರಾಮಯ್ಯ ಪರ ಘೋಷಣೆ ಮೊಳಗಿಸಿದರು. ಬಿಜೆಪಿ- ಜೆಡಿಎಸ್ ಹಗರಣ ಹೊರಹಾಕಿ ಘೋಷಣೆ ಮೊಳಗಿಸಿದರು.