ವಿಜಯಪುರ

ಸೈಕಲ್ ಅಂಗಡಿ ಬೆಂಕಿಗಾಹುತಿ, ಅಬ್ಬಬ್ಬಾ ಅದೇನು ಹೊಗೆ, ಅದೇನು ಬೆಂಕಿ? ಹಾನಿಯಾಗಿದ್ದು ಎಷ್ಟು?

ಸರಕಾರ ನ್ಯೂಸ್ ವಿಜಯಪುರ

ಸೈಕಲ್ಸ್ ಹಾಗೂ ಸೈಕಲ್ ಟೈಯರ್ ಗಳನ್ನು ಇಟ್ಟಿದ್ದ ಗೋದಾಮಿನಲ್ಲಿ ಅಗ್ನಿಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ದಹನವಾಗಿದೆ.

ವಿಜಯಪುರ ‌ನಗರದ ಗಣಪತಿ ಚೌಕ್ ಬಳಿಯಿರುವ ಎನ್. ಜೆ. ಮೆಹತಾ ಸೈಕಲ್ಸ್ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಬೆಂಕಿ ಅವಘಡಕ್ಕೆ‌ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆಯಿಂದ ಇಡೀ ಏರಿಯಾದಲ್ಲಿ ವ್ಯಾಪಿಸಿದ ಹೊಗೆಯಿಂದ ಮೂಗು ಕಟ್ಟುವಂತಾಯಿತು.

ವಿಜಯಪುರ ನಗರದಲ್ಲಿ ಸೈಕಲ್ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸುತ್ತಿರುವ ಅಗ್ನಿ ಶಾಮಕ‌ ಠಾಣೆ ಸಿಬ್ಬಂದಿ.

ಎರಡು ಅಗ್ನಿಶಾಮಕ ದಳದಿಂದ ಬೆಂಕಿ‌ ನಂದಿಸುವ ಕಾರ್ಯಾಚರಣೆ ನಡೆಯಿತು.
ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದ್ದು ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!