ಗೋಳಗುಮ್ಮಟ ಮ್ಯೂಸಿಯಂನಲ್ಲಿ ಬಾಂಬ್ ? ಈ- ಮೇಲ್ ಸಂದೇಶಕ್ಕೆ ಬೆಚ್ಚಿ ಬಿದ್ದ ಪ್ರವಾಸಿಗರು !
ಸರಕಾರ ನ್ಯೂಸ್ ವಿಜಯಪುರ
ಐತಿಹಾಸಿಕ ವಸ್ತು ಸಂಗ್ರಹಾಲಯಗಳಲ್ಲಿ ಬಾಂಬ್ ಇರಿಸಿದ್ದಾಗಿ ರವಾನೆಯಾದ ಈ- ಮೇಲ್ ಸಂದೇಶ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ.
ದೇಶದಲ್ಲಿ 100 ಕ್ಕೂ ಅಧಿಕ ಐತಿಹಾಸಿಕ ಮ್ಯೂಸಿಯಂಗಳಿವೆ. ಈ ಮ್ಯೂಸಿಯಂಗಳಲ್ಲಿ ಬಾಂಬ್ ಇರಿಸಿರುವುದಾಗಿ ಯಾರೋ ಕಿಡಿಗೇಡಿಗಳು ಪುರಾತತ್ವ ಇಲಾಖೆಗಳಿಗೆ ಈ- ಮೇಲ್ ಸಂದೇಶ ರವಾನಿಸಿದ್ದಾರೆ.
ಅದರಂತೆ ವಿಶ್ವ ವಿಖ್ಯಾತ ಗೋಳಗುಮ್ಮಟದ ಮುಂದಿನ ಮ್ಯೂಸಿಂಗೂ ಸಂದೇಶ ಅನ್ವಯವಾಗಿದೆ. ಆ ಹಿನ್ನೆಲೆ ಗೋಳಗುಮ್ಮಟ ಸಿಬ್ಬಂದಿ ಪರೀಕ್ಷೆ ನಡೆಸಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಪಾಸಣೆ ನಡೆಸಲಾಗಿ ಯಾವುದೇ ಬಾಂಬ್ ಪತ್ತೆ ಆಗಿಲ್ಲ. ಅದಾಗ್ಯೂ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಜದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)