ಜಮೀನಿಗೆ ಕುರಿಗಳು ನುಗ್ಗಿದ್ದಕ್ಕೆ ಹೀಗಾ ಮಾಡೋದು? ಜಮೀನಿನ ಮಾಲೀಕರ ಆಕ್ರೋಶಕ್ಕೆ ಬಲಿಯಾಗಿದ್ದು ಯಾರು ಗೊತ್ತಾ?
ಸರ್ಕಾರ್ ನ್ಯೂಸ್ ತಿಕೋಟಾ
ಮೂಕಪ್ರಾಣಿಗಳು ತಿಳಿದೋ…ತಿಳಿಯದೋ ಜಮೀನಿಗೆ ನುಗ್ಗಿದ ಕಾರಣಕ್ಕೆ ಕುರಿಗಾಹಿಯನ್ನು ಬಲಿ ತೆಗೆದುಕೊಂಡ ಘಟನೆ ತಿಕೋಟಾ ತಾಲೂಕಿನ ಹೊನವಾಡದಲ್ಲಿ ನಡೆದಿದೆ.
ಜಮೀನಿಗೆ ಕುರಿಗಳು ನುಗ್ಗಿದ ಕಾರಣಕ್ಕೆ ಕುರಿಗಾಹಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಶ್ರೀಕಾಂತ ದಬಡೆ (22) ಅಸುನೀಗಿದ್ದಾನೆ. ಅದೇ ಗ್ರಾಮದ ಬಸವರಾಜ ಸಿದರಾಯ ಉಂಡೋಡಿ ಹಾಗೂ ಚಿದಾನಂದ ಸಿದರಾಯ ಉಂಡೋಡಿ ಎಂಬುವರು ಈ ಕೃತ್ಯ ಎಸಗಿದ್ದಾರೆ.
ಶ್ರೀಕಾಂತ್‌ನ ಕುರಿಗಳು ಹುಲ್ಲು ಮೇಯುತ್ತಾ ಬಸವರಾಜನ ಜಮೀನಿಗೆ ನುಗ್ಗಿವೆ ಇದರಿಂದ ಸಿಟ್ಟಾದ ಬಸವರಾಜ ಹಾಗೂ ಆತನ ಸಹೋದರ ಸೇರಿ ಶ್ರೀಕಾಂತನ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಶ್ರೀಕಾಂತನನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಿಸದೆ ಅಸನೀಗಿದ್ದಾನೆ. ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.