ನಮ್ಮ ವಿಜಯಪುರ

ವ್ಯಕ್ತಿಯ ಬರ್ಬರ ಕೊಲೆ, ದುಷ್ಕರ್ಮಿಗಳು ಪರಾರಿ

ಸರಕಾರ್ ನ್ಯೂಸ್ ವಿಜಯಪುರ

ವ್ಯಕ್ತಿ ಯೋರ್ವನನ್ನು ಹರಿತವಾದ ಆಯುಧದಿಂದ ಬರ್ಬರವಾಗಿ ಕೊಲೆ ಮಾಡಲಾಗಿದೆ.

ವಿಜಯಪುರ ತಾಲ್ಲೂಕಿನ ಅತ್ತಾಲಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತ ವ್ಯಕ್ತಿ ರಾಜು ಗರುಡ್ಕರ ಎಂದು ತಿಳಿದು ಬಂದಿದೆ.
ಏಕಾಏಕಿ ರಾಜು ಮೇಲೆ ಹರಿತವಾದ ಆಯುಧದಿಂದ ಹೊಡೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಹತ್ಯೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!