ಬೊಮ್ಮಾಯಿ ಬಜೆಟ್‌ನಲ್ಲಿ ಕೃಷ್ಣೆಗೆ ಅನ್ಯಾಯ, ಮೀಸಲಿಟ್ಟ ಅನುದಾನ ಎಷ್ಟು ಗೊತ್ತಾ?
ವಿಜಯಪುರ: ಉತ್ತರ ಕರ್ನಾಟಕದ ಜೀವ ನದಿ ಕೃಷ್ಣೆಗೆ ಸಿಎಂ ಬಸವರಾಜ ಮೊಮ್ಮಾಯಿ ನೇತೃತ್ವದ ಸರ್ಕಾರ ಮತ್ತು ಅನ್ಯಾಯ ಮಾಡಿದ್ದು, ಪ್ರಸಕ್ತ 2022-23ನೇ ಸಾಲಿನ ಬಜೆಟ್‌ನಲ್ಲಿ ಕೇವಲ 5000 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ.
ಆ ಮೂಲಕ ಕೃಷ್ಣಾ ಕೊಳ್ಳದ ಜನರ ನಿರೀಕ್ಷೆಗೆ ಎಳ್ಳು ನೀರು ಬಿಡಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3 ರ ಸಮರ್ಪಕ ಅನುಷ್ಟಾನಕ್ಕೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಕನಿಷ್ಠ 10 ಸಾವಿರ ಕೋಟಿ ರೂ.ಅನುದಾನಕ್ಕೆ ಯಾವುದೇ ಕೊರತೆ ಇಲ್ಲ ಎಂಬ ಕೃಷ್ಣೆಯ ಕುಡಿಗಳ ಕನಸು ಭಗ್ನವಾಗಿದೆ.
ಸದಾರಿ 5000 ಕೋಟಿ ರೂ.ಅನುದಾನದಲ್ಲಿ ಭೂಸ್ವಾಧೀನ, ಪುನರ್‌ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿ ಕಷ್ಟಸಾಧ್ಯವಾಗಿದೆ.
ಇನ್ನು ತೋಟಗಾರಿಕೆಗೆ ಹೆಸರಾದ ರಾಜ್ಯದ ದ್ರಾಕ್ಷಿ ಕಣಜ ಖ್ಯಾತಿಯ ವಿಜಯಪುರ ದ್ರಾಕ್ಷಿ ಬೆಳೆಗಾರರಿಗೆ ಸಿಎಂ ಬೊಮ್ಮಾಯಿ ಸಿಹಿ ಸುದ್ದಿ ನೀಡಿದ್ದಾರೆ. ತೊರವಿಯಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ದ್ರಾಕ್ಷಿ ಸಂಗ್ರಹಣೆ ಹಾಗೂ ವಿತರಣೆ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ.