ಬೆಳಗಾವಿ

ಹೆಣ್ಣು ಕೊಡುವುದಿಲ್ಲ ಎಂದಿದ್ದಕ್ಕೆ ಹೀಗಾ ಮಾಡೋದು? ಮಾನ ಹೋಯಿತೆಂದು ಹುಡುಗಿ ಮಾಡಿದ್ದೇನು? ಅಯ್ಯೋ….ಹೀಗಾಗಬಾರದಿತ್ತು !

ಸರಕಾರ ನ್ಯೂಸ್‌ ಅಥಣಿ

ಹೆಣ್ಣು ಕೊಡುವುದಿಲ್ಲವೆಂದಿದ್ದಕ್ಕೆ ಸಿಟ್ಟಾದ ಯುವಕ ಹುಡುಗಿಯನ್ನು ಕೈಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಸ್ವಪ್ನಾ ಸುಭಾಷ ಹಿಪ್ಪರಗಿ (19) ಮೃತ ಯುವತಿ. ಅದೇ ಗ್ರಾಮದ ಸುನೀಲ ಅಣ್ಣಪ್ಪ ಧರಿಗೌಡರ ಈಗ ಅಪರಾಧಿ ಸ್ಥಾನದಲ್ಲಿದ್ದಾನೆ.

ಘಟನೆ ವಿವರ:

ಸುನೀಲ ಅಣ್ಣಪ್ಪ ಧರಿಗೌಡರ ಈತನ ತಂದೆ ತಾಯಿ ಸ್ವಪ್ನಾಳ ಮನೆಗೆ ಬಂದು ಹೆಣ್ಣು ಕೇಳಿದ್ದಾರೆ. ಅದಕ್ಕೆ ಸ್ವಪ್ನಾ ತಂದೆ ತಾಯಿ ನಮ್ಮ ಮಗಳು ಇನ್ನೂ ಶಾಲೆ ಕಲಿಯುವವಳಿದ್ದು, ನಾವು ಕೊಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಸಿಟ್ಟಾದ ಸುನೀಲ ಸಂಕೋನಕಟ್ಟಿ ಜಾತ್ರೆಗೆ ಹೋಗಿ ಮರಳಿ ಬರುವಾಗ ಸ್ವಪ್ನಾಳ ಕೈ ಹಿಡಿದು ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾನೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಸ್ವಪ್ನಾ ತೋಟದ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!