ಕೊನೆಗೂ ಸೆರೆ ಸಿಕ್ಕ ಚಿರತೆ, ಎಲ್ಲಿ? ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ನ್ಯೂಸ್
ಸರಕಾರ ನ್ಯೂಸ್ ವಿಜಯಪುರ
ಕಳೆದ ಹಲವು ದಿನಗಳಿಂದ ತೀವ್ರ ಆತಂಕ ಸೃಷ್ಠಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದ್ದು, ಜನರ ಭಯ, ಆತಂಕ ಮತ್ತು ಗೊಂದಲಗಳಿಗೆ ತೆರೆ ಬಿದ್ದಿದೆ.
ಇಂಡಿ, ಸಿಂದಗಿ, ಮುದ್ದೇಬಿಹಾಳ ಸುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಜನ ಆತಂಕ ತೋಡಿಕೊಳ್ಳುತ್ತಲೇ ಇದ್ದರು. ಕೆಲವೆಡೆ ದನಕರುಗಳನ್ನೂ ತಿಂದಿತ್ತು. ಆದರೆ, ಅದು ಚಿರತೆಯದ್ದೇ ದಾಳಿ ಎಂಬುದರ ಬಗ್ಗೆ ಖಚಿತತೆ ಇರಲಿಲ್ಲ. ಅದಾಗ್ಯೂ ಅರಣ್ಯ ಇಲಾಖೆ ಸಿಬ್ಬಂದಿ ಮುಂಜಾಗೃತ ಕ್ರಮವಾಗಿ ಅಲ್ಲಲ್ಲಿ ಬೋನು ಇರಿಸಿದ್ದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಚಿರತೆ ಭಯ, ಸಂಗೋಗಿ ಜಮೀನಿನಲ್ಲಿ ಕಂಡಿದ್ದು ಚಿರತೆಯಾ?
ಇದೀಗ ಶುಕ್ರವಾರ ನಸುಕಿನ ಜಾವ ಸಿಂದಗಿ ತಾಲೂಕಿನ ಸೋಮಜಾಳ ಗ್ರಾಮದಲ್ಲಿ ಚಿರತೆ ಬಲೆಗೆ ಬಿದ್ದಿದೆ. ಪೋಸ್ಟ್ ಮಾಸ್ತರ್
ಅಮೀನಪಟೇಲ ಬಾಪುಲಾಲ ಮಕಾಶಿ ಇವರ ಜಮೀನಿನಲ್ಲಿ ಚಿರತೆ ಸೆರೆ ಸಿಕ್ಕಿದೆ. ಗ್ರಾಮಸ್ಥರು ಚಿರತೆ ನೋಡಲು ಮುಗಿಬಿದ್ದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿದ್ದು, ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ.