ವಿಜಯಪುರ

ಕೂಡಲಸಂಗಮ ಐಕ್ಯಮಂಟಪಕ್ಕೆ ಭೇಟಿ, ಲಿಂಗಾಯತ ನಾಯಕ ಎಂ.ಬಿ. ಪಾಟೀಲ‌ನಮನ, ಬಸವಜಯಂತಿ‌ ವಿನೂತನ ಆಚರಣೆ

ವಿಜಯಪುರ: ಕೂಡಲ ಸಂಗಮದಲ್ಲಿರುವ ಮಹಾತ್ಮಾ ಬಸವೇಶ್ವರರ ಐಕ್ಯ ಮಂಟಪಕ್ಕೆ ಭೇಟಿ ನೀಡಿ ನಮನ ಸಲ್ಲಿಸುವ ಮೂಲಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಶಾಸಕರೂ ಆದ ಲಿಂಗಾಯತ ನಾಯಕ ಡಾ.ಎಂ.ಬಿ. ಪಾಟೀಲ ಬಸವಜಯಂತಿಯನ್ನು ವಿನೂತನವಾಗಿ ಆಚರಿಸಿದರು.

ಮಂಗಳವಾರ ಬಸಣ್ಣನವರ ಐಕ್ಯ ಸ್ಥಳವಾದ ಕೂಡಲಸಂಗಮಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸಿದರು.
ಭಕ್ತಿ ಬಂಡಾರಿ ಬಸವಣ್ಣನವರು 12 ನೇ ಶತಮಾನದಲ್ಲಿ ಮಾಡಿದ ಕ್ರಾಂತಿಯನ್ನು ನೆನೆದರು. ಬಸವಣ್ಣ ನವರ ಕಾಯಕ ಮತ್ತು ದಾಸೋಹ ತತ್ವ, ಸಮ ಸಮಾಜ ನಿರ್ಮಾಣದ‌ ಕನಸನ್ನು ನೆನೆದರು.
ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಐಕ್ಯ ಮಂಟಪದಲ್ಲಿ ಪುಷ್ಪಾರ್ಚನೆ ಮಾಡಿದರು‌. ಎಂ‌.ಬಿ. ಪಾಟೀಲರಿಗೆ ಹರಸಿದರು.

error: Content is protected !!