ಆರ್ ಎಸ್ ಎಸ್ ಕೆಣಕುತ್ತಿರುವ ಕಾಂಗ್ರೆಸ್ಸಿಗರಿಗೆ ಟಾಂಗ್, ಸಿದ್ದರಾಮಯ್ಯ ಚೆಡ್ಡಿ ಲೂಸ್ ಆಗಿದೆ, ಸಚಿವ ಪ್ರಲ್ಹಾದ್ ಜೋಷಿ ಮಾರ್ಮಿಕ ಹೇಳಿಕೆ ಏನು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ರಾಜ್ಯಾದ್ಯಂತ ಚರ್ಚೆಯಾಗುತ್ತಿರುವ ಆರ್ ಎಸ್ ಎಸ್ ಚೆಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮಾರ್ಮಿಕ ಉತ್ತರ ನೀಡಿದ್ದಾರೆ.
ವಿಜಯಪುರ ಜಿಲ್ಲೆ ನಿಡಗುಂದಿಯಲ್ಲಿ ಸೋಮವಾರ ವಿಧಾನ ಪರಿಷತ್ ಚುನಾವಣೆ ಪ್ರಚಾರಾರ್ಥ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಹಾಗೂ ಸಿದ್ದರಾಮಯ್ಯಗೆ ಚೆಡ್ಡಿ ಲೂಸ್ ಆಗಿದೆ. ಅವರು ಚೆಡ್ಡಿ ಹರಕರಾಗಿದ್ದಾರೆ, ಹಾಗಾಗಿ ಬೇರೆಯವರ ಚೆಡ್ಡಿ ಸುಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಉತ್ತರಪ್ರದೇಶದಲ್ಲಿ ಜನ ಅವರ ಚೆಡ್ಡಿ ಕಳಚಿ ಕಳುಹಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನ ಚೆಡ್ಡಿ ಮತ್ತು ಪಂಚೆ ಕಳಚಿ ಕಳುಹಿಸಿದ್ದಾರೆ. ಅವರ ಚೆಡ್ಡಿಯನ್ನು ಜನ ಸುಟ್ಟಿರಬೇಕು ಅದಕ್ಕಾಗಿ ನಮ್ಮ ವಿರುದ್ದ ಸಿಟ್ಟು ತೀರಿಸಿಕೊಳ್ಳುತ್ತಿದ್ದಾರೆಂದು ಟೀಕಿಸಿದರು.
ನೀವು ಓರ್ವ ಸಿಎಂ ಆಗಿದ್ದವರು. ಜನತೆ 30 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಪ್ರಹ್ಲಾದ್ ಜೋಷಿ, ಬದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಋಣಿಯಾಗಿರಬೇಕು. ಕೇವಲ ಒಂದೂವರೆ ಸಾವಿರ ಮತಗಳ ಅಂತರದಿಂದ ಪಾರಾಗಿ ವಿಧಾನಸೌಧದಲ್ಲಿ ಇದ್ದೀರಾ. ಐದು ವರ್ಷ ಆಡಳಿದಲ್ಲಿದ್ದವರು ನೀವು ಆದರೆ ಜನ ನಿಮ್ಮ ಚೆಡ್ಡಿ ಕಸಿದುಕೊಂಡಿದ್ದಾರೆ. ಮೊದಲು ನಿಮ್ಮ ಚೆಡ್ಡಿ ಗಟ್ಟಿ ಮಾಡಿಕೊಳ್ಳೋ ಪ್ರಯತ್ನ ಮಾಡಿ ಎಂದು ಸಲಹೆ ನೀಡಿದರು.
ರಾಹುಲ್ ಗಾಂಧಿ ಹಾಗೂ ಅವರ ತಂದೆ ಅಜ್ಜ ಆರ್ ಎಸ್ ಎಸ್ ನ್ನು ಒಳಗಿನಿಂದ ಸುಡಲು ಹೋಗಿ ರಾಜಕೀಯವಾಗಿ ಏನಾಗಿದೆ ನೋಡಿ. ನೀವು ನೇರವಾಗಿ ಆರ್ ಎಸ್ ಎಸ್ ವಿರುದ್ದ ಮಾಡುತ್ತಿದ್ದೀರಾ. ಇಡೀ ದೇಶದಲ್ಲಿ ಜನ ನಿಮ್ಮ ಚೆಡ್ಡಿ ಕಸಿದುಕೊಂಡಿದ್ದಾರೆ. ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ನಿಮ್ಮ ಚೆಡ್ಡಿ ಕಸಿದುಕೊಂಡಿದ್ದಾರೆ. ಛತ್ತೀಸಗಢದಲ್ಲೂ ಲೂಸ್ ಆಗಿದೆ. ಮಧ್ಯಪ್ರದೇಶದಲ್ಲೂ ನಿಮ್ಮ ಚೆಡ್ಡಿ ಲೂಸ್ ಆಗಿ ಹೋಗಿದೆ. ಎಲ್ಲೆಡೆ ಚೆಡ್ಡಿ ಕಳೆದುಕೊಂಡಿದ್ದೀರಿ. ನಿಮ್ಮ ಚೆಡ್ಡಿ ಹೋಗಿದ್ದಕ್ಕೆ ನೀವು ಆರ್ ಎಸ್ ಎಸ್ ಚೆಡ್ಡಿ ಸುಡೋಕೆ ಬಂದಿದ್ದೀರಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಮುಂದಿನ ದಿನಗಳಲ್ಲಿ ಅಳಿದುಳಿದ ನಿಮ್ಮ ಚೆಡ್ಡಿಯನ್ನು ಜನರು ಕಸಿದುಕೊಂಡು ಬೆತ್ತಲೆ ಮಾಡುತ್ತಾರೆ. ಇಂಥ ಹುಚ್ಚು ಚಟುವಟಿಕೆ ನಿಲ್ಲಿಸಿ ಎಂದು ಜೋಷಿ ಸಲಹೆ ನೀಡಿದರು.
ಸಚಿವ ಉಮೇಶ ಕತ್ತಿ, ವಿಪ ಸದಸ್ಯ ಲಕ್ಷ್ಮಣ ಸವದಿ, ಸಂಸದ ರಮೇಶ ಜಿಗಜಿಣಗಿ, ಅಭ್ಯರ್ಥಿ ಅರುಣ ಶಹಾಪುರ ಮತ್ತಿತರರು ಇದ್ದರು.