ಬಸ್ ನಲ್ಲಿ ಹೆಚ್ಚಿದ ಸರಗಳ್ಳರ ಹಾವಳಿ, ಇದು ಶಕ್ತಿ ಯೋಜನೆ ಎಫೆಕ್ಟ್ ಎಂದ ಜನ….!
ಸರಕಾರ ನ್ಯೂಸ್ ವಿಜಯಪುರ
ಶಕ್ತಿ ಯೋಜನೆ ಜಾರಿಗೆ ಹಿನ್ನೆಲೆ ಸರಕಾರಿ ಬಸ್ ಗಳಲ್ಲಿ ಸಂಚರಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇನ್ನೊಂದೆಡೆ ಸರಗಳ್ಳರ ಹಾವಳಿಯೂ ಹೆಚ್ಚಾಗಿದೆ ಎಂಬುದಕ್ಕೆ ಈ ಘಟನೆಯೆ ಸಾಕ್ಷಿ.
ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ
ಬಸ್ ಏರುವಾಗ ಮಹಿಳೆಯ ಚಿನ್ನ ಕಳ್ಳತನ ಆಗಿರುವ ಘಟನೆ ನಡೆದಿದೆ.
ದಿಲ್‌ಶಾದ್ ಬಳ್ಳಾರಿ ಎಂಬುವರ ಚಿನ್ನವನ್ನು ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ. ಸುಮಾರು 1 ಲಕ್ಷದ 30 ಸಾವಿರ ಮೌಲ್ಯದ ಚಿನ್ನ ಕಳ್ಳತನ ಆಗಿದೆ.
ಅದಕ್ಕಾಗಿ ನಮ್ಗೆ ಪೊಲೀಸರು ನ್ಯಾಯ ಒದಗಿಸಬೇಕು ಎಂದು ಬಳ್ಳಾರಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.