ವಿಜಯಪುರ

ಇಂಡಿ ಪುರಸಭೆ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ

ಇಂಡಿ: ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ ಆರು ಜನ ಸೇರಿ ಒಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ, ವಿಚಿತ್ರವೆಂದರೆ ಹಲ್ಲೆಗೊಳಗಾಗಿದ್ದು ಪುರಸಭೆ ಸದಸ್ಯ.

ಇಂಥದ್ದೊಂದು ಘಟನೆ ಇಂಡಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ. ಪಟ್ಟಣದ 15ನೇ ವಾರ್ಡ್ ಪುರಸಭೆ ಸದಸ್ಯ ಶಬ್ಬೀರ ಖಾಜಿ ಹಲ್ಲೆಗೊಳಗಾಗಿದ್ದಾರೆ.

ಎಂ,ಬಿ, ಮಾಣಿಕ್ ಹಾಗೂ ಆರು ಜನರು ಸೇರಿ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು ಇದೀಗ ಅದರ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ. ಈ ಬಗ್ಗೆ ಇಂಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಾಳು ಪುರಸಭೆ ಸದಸ್ಯ ಶಬ್ಬೀರ್ ಖಾಜಿ ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

error: Content is protected !!